ಮಹಾನಗರಪಾಲಿಕೆಗಳು ಮಹಾನಗರಗಳ ಆಡಳಿತವನ್ನು ನಡೆಸುತ್ತವೆ. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯಂತೆ ಒಂದು ನಗರ ಮಹಾನಗರಪಾಲಿಕೆ ದರ್ಜೆಗೇರಲು ಪೂರ್ಣ ನಗರ ಪ್ರದೇಶದಲ್ಲಿ ೨ ಲಕ್ಷ ಜನಸಂಖ್ಯೆ ಮತ್ತು ಸುತ್ತಲಿನ ಪ್ರದೇಶದಲ್ಲಿ ೧ ಲಕ್ಷ ಜನಸಂಖ್ಯೆ ಅಂದರೆ ಒಟ್ಟಾರೆ ೩ ಲಕ್ಷ ಜನಸಂಖ್ಯೆ ಇರಬೇಕು. ನಗರದ ಕಂದಾಯ ೬ ಕೋಟಿ ರೂಪಾಯಿಗಳಿಗೂ ಮಿಕ್ಕಿರಬೇಕು ಮತ್ತು ಜನಸಾಂದ್ರತೆ ಪ್ರತಿ ಚದರ ಕಿ.ಮಿ.ಗೆ ೩೦೦೦ ಮಿಕ್ಕಿರಬೇಕು. ಕರ್ನಾಟಕದಲ್ಲಿ ೨೦೧೧ರಲ್ಲಿರುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ೧೧ ನಗರಗಳು ಮಹಾನಗರಪಾಲಿಕೆ ಸ್ಥಾನಮಾನ ಹೊಂದಿವೆ. == ಕರ್ನಾಟಕದಲ್ಲಿರುವ ಮಹಾನಗರಪಾಲಿಕೆಗಳು ==